Tuesday, July 31, 2018

Tuesday, July 24, 2018

ಸಮಾವೇಶ

ಸ್ನೇಹಿತರೇ,
        ಇಂದು *ಶ್ರೀ ಪಂಡಿತಾರಾದ್ಯ ಗುರುಗಳ* ಬಳಿ ಚರ್ಚಿಸಿದಂತೆ ಶಿವಮೊಗ್ಗದಲ್ಲಿ ಮಾಡಲು ನಿರ್ಧರಿಸಿದ ಸಮಾವೇಶವನ್ನು *ಬೆಂಗಳೂರನ ತರಳಬಾಳು ಕೇಂದ್ರದಲ್ಲಿ ದಿನಾಂಕ 02-08-18* ರಂದುಗುರುವಾರದಂದು ಮಾಡುವುದೆಂದು ತಿಳಿಸಿದ್ದಾರೆ. ಈ ಬಗ್ಗೆ ಮಂತ್ರಿಗಳ ಬಳಿ ಮಾತಾಡುವುದು. ಹಕ್ಕೊತ್ತಾಯ ಮಂಡಿಸುವುದನ್ನ ಅಂದಿನ ದಿನವೇ ನಿರ್ಧರಿಸುವುದು ಮತ್ತು ಮುಂದಿನ ಹೋರಾಟದ ಬಗ್ಗೆಯೂ ನಿರ್ಧರಿಸುವುದೆಂದು ಮಾತಾಡಲಾಗಿದೆ. ಮುಂದಿನ ಬೆಳವಣಿಗೆಗಳನ್ನು ತಿಳಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ‌ ಬಗ್ಗೆ ಸಂಘಟನೆ ಕಾರ್ಯಪ್ರವೃತ್ತವಾಗಲಿ.
ಧನ್ಯವಾದಗಳು

 *ಡಾ.ಸಾಸ್ವೇಹಳ್ಳಿ ಸತೀಶ್*
             ಶಿವಮೊಗ್ಗ

Tuesday, July 10, 2018

ಬಳ್ಳಾರಿ : ರಂಗ ಶಿಕ್ಷಕರ ನೇಮಕಾತಿಗಾಗಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ : ರಂಗ ಶಿಕ್ಷಕರ ನೇಮಕಾತಿಗಾಗಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ 








Sunday, July 8, 2018

ರಾಯಚೂರು : ಜಿಲ್ಲಾಧಿಕಾರಿಗಳಿಗೆ ರಂಗ ಶಿಕ್ಷಕರ ನೇಮಕಾತಿ ಕೋರಿ ಮನವಿ

ರಾಯಚೂರು : ಜಿಲ್ಲಾಧಿಕಾರಿಗಳಿಗೆ ರಂಗ ಶಿಕ್ಷಕರ ನೇಮಕಾತಿ ಕೋರಿ ಮನವಿ 




ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಸಮಾವೇಶ

ಸ್ನೇಹಿತರೇ, 
        ಶಿವಮೊಗ್ಗದಲ್ಲಿ ಮಾಡಬೇಕೆಂದಿದ್ದ ಸಮಾವೇಶವು ಬೆಂಗಳೂರಿಗೆ ವರ್ಗಾವಣೆ ಆಗ್ತಾ ಇದೆ
  ಕಾರಣ
      ಸಾಣೆಹಳ್ಳಿ ಗುರುಗಳು ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಇದನ್ನು ಆಯೋಜಿಸುವ ಬಗ್ಗೆ ಹೇಳಿದ್ದಾರೆ. ಅಲ್ಲಿಗೆ ಮಂತ್ರಿಗಳು ಸಂಭಂದ ಪಟ್ಟ ಅಧಿಕಾರಿಗಳನ್ನು ಕರೆಯುವುದು ಸುಲಭ ಎಂಬುದು ಅವರ ಅನಿಸಿಕೆ. ಆಬಗ್ಗೆ ಶಶಿಧರ ಬಾರೀಘಾಟ್ ಮುಂತಾದ ಹಿರಿಯರಿಗೆ ಜವಬ್ದಾರಿ ಕೊಡುತ್ತಿದ್ದಾರೆ

           ಈಗಾಗಲೇ ಸಿದ್ದತೆಗಳನ್ನು ಮಾಡಿಕೊಂಡ ನಮಗೂ ಇದು ಸರಿ ಅನ್ನಿಸಿತು. ಮುಖ್ಯವಾಗಿ ಸಂಬಂಧ ಪಟ್ಟವರಿಗೆ ನಮ್ಮ ಕೂಗು ಬೇಗ ಕೇಳಬೇಕೆಂದರೆ ಬೆಂಗಳೂರೆ ಸರಿ
      ಬೆಂಗಳೂರಲ್ಲಿ ಯಾವದಿನ ಎಂಬುದನ್ನು ತಿಳಿಸುತ್ತಾರೆ. 
    ಕೆಲವರ ಅಭಿಪ್ರಾಯದಂತೆ ತೀವ್ರಸ್ವರೂಪದ ಹೋರಾಟವನ್ನು ಅಂದೇ ನಿರ್ಧರಿಸಬಹುದು ಅನ್ನಿಸುತ್ತದೆ. ಶಿವಮೊಗ್ಗ ಹವ್ಯಾಸಿ ಕಲಾವಿದರ ಒಕ್ಕೂಟ ನಿಮ್ಮೊಂದಿಗೆ ಇರುತ್ತದೆ
               ಸಾಸ್ವೇಹಳ್ಳಿ ಸತೀಶ್

Thursday, July 5, 2018

ರಂಗ ಪದವೀಧರರ ಸಂಘ ರಾಯಚೂರು

ರಂಗ ಪದವೀಧರರ ಸಂಘ ರಾಯಚೂರು

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ರಂಗ ಪದವೀಧರರನ್ನು ನಾಟಕ ಶಿಕ್ಷಕರಾಗಿ‌ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಶಿಕ್ಷಣ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರು ಇವರುಗಳಿಗೆ  ರಾಯಚೂರು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲು ನಾಳೆ ದಿನಾಂಕ  06-07-2018  ಶುಕ್ರವಾರ ಬೆಳಿಗ್ಗೆ 10-30ಕ್ಕೆ ಗಂಟೆಗೆ ಸರಿಯಾಗಿ ಸಮಯ ನಿರ್ಧಾರಿತವಾಗಿದೆ ಸಮಯಕ್ಕೆ ಸರಿಯಾಗಿ ಎಲ್ಲರೂ  ರಾಯಚೂರು ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಬೇಕಾಗಿ ವಿನಂತಿ
ಮನವಿ‌ ಸಲ್ಲಿಸಿದ ನಂತರ, ಮುಂದಿನ ನಡೆಯ ರೂಪುರೇಷಗಳು ಸಿದ್ದವಾಗುತ್ತಿದ್ದು. ದಯಮಾಡಿ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಂಡು ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ..

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

ಲಕ್ಷ್ಮಣ ಮಂಡಲಗೇರಾ
ಧರ್ಮರಾಜ ಗೋನಾಳ

Tuesday, July 3, 2018

ಶಿವಮೊಗ್ಗ : ರಂಗ ಶಿಕ್ಷಕರ ನೇಮಕಾತಿಗಾಗಿ ಮನವಿ

ಶಿವಮೊಗ್ಗ : ರಂಗ ಶಿಕ್ಷಕರ ನೇಮಕಾತಿಗಾಗಿ ಮನವಿ 




ರಾಜ್ಯಮಟ್ಟದ ರಂಗ ಪದವೀಧರರ ಸಮಾವೇಶ

ಸ್ನೇಹಿತರೇ,
         ಶಿವಮೊಗ್ಗ ಹವ್ಯಾಸಿ ಕಲಾವಿದರ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾ ರಂಗಪದವೀಧರರನ್ನು ಒಳಗೊಂಡು ರಾಜ್ಯಮಟ್ಟದ ರಂಗ ಪದವೀಧರರ ಸಮಾವೇಶ ಮಾಡಬೇಕೆಂದಿದ್ದೇವೆ.
 28-07-18 ಶನಿವಾರ ನಿಗದಿಮಾಡಿದ್ದೇವೆ ಕಾರಣ ಸಾಣೇಹಳ್ಳಿ ಗುರುಗಳು ಮತ್ತಿತರ ಎಂಎಲ್ ಎ ,ಎಂ ಎಲ್ ಸಿ ಗಳು ಸಮಯ ನೀಡಿದ್ದಾರೆ
         ಮಾನ್ಯ ಸಚಿವರುಗಳನ್ನು ಕರೆಯುವ ಪ್ರಯತ್ನ ಮಾಡಲಾಗುವುದು.
      ಇದು ವಿಚಾರ ಸಂಕಿರಣ ಮಾದರಿಯಲ್ಲಿ ಇರದೇ ಹಕ್ಕೊತ್ತಾಯದ ಸ್ವರೂಪದಲ್ಲಿ ಇರಬೇಕು ಅಂದುಕೊಳ್ಳಲಾಗಿದೆ
     ಮುಖ್ಯವಾಗಿ ರಂಗಪದವೀಧರರು ಭಾಗವಹಿಸುವುದು ಮುಖ್ಯವಾಗಿರುತ್ತದೆ.ಹಾಗಾಗಿ ನಿಮ್ಮೆಲ್ಲರ ಸಲಹೆ ಮುಖ್ಯ. ನಿಮ್ಮ ಬರುವಿಕೆ ಮತ್ತು ಸಮಾವೇಶದ ರೂಪುರೇಷೆಯ ಬಗ್ಗೆ ನೀವು ಮಾಹಿತಿ ಕೊಡಿ
           ಶೇಕಡಾ90 ರಷ್ಟು ಹಾಜರಾದರೆ ಮಾತ್ರ ಸಫಲವಾಗುತ್ತದೆ. ಪ್ರತೀ ಜಿಲ್ಲೆಯಿಂದ ಜವಬ್ದಾರಿ ತೆಗೆದುಕೊಂಡು ನಿರ್ವಹಿಸುವವರು ಮುಖ್ಯ.
   ಹೆಚ್ಚಿನ ವಿವರಗಳಿಗೆ ಅಜಯ್ ಮತ್ತು ಇತರೆ ಗೆಳೆಯರು ನಿಮ್ಮನ್ನು ಸಂಪರ್ಕಿಸುತ್ತಾರೆ.