ನಾಟಕ ಅಕಾಡೆಮಿ ಹಾಗೂ ರಂಗಾಯಣಗಳ ನೇತೃತ್ವದ ರಂಗಕರ್ಮಿಗಳ ನಿಯೋಗ ಇಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್ ಸುರೇಶಕುಮಾರ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ರಂಗ ಶಿಕ್ಷಕರ ನೇಮಕಾತಿ ಕುರಿತಂತೆ ಚರ್ಚಿಸಿ ಮನವಿ ಸಲ್ಲಿಸಲಾಯಿತು.. ಈ ಸಂದರ್ಭದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಅರುಣ್ ಶಹಾಪುರ, ನಾಟಕ ಅಕಾಡೆಮಿ ಅದ್ಯಕ್ಷರಾದ ಆರ್ ಭೀಮಸೇನ , ಅಕಾಡೆಮಿ ಸದಸ್ಯರಾದ ಪ್ರಭುದೇವ ಕಪ್ಪಗಲ್ಲು ,ರಂಗ ಕರ್ಮಿಗಳಾದ ಡಾ.ಬಿವಿ ರಾಜರಾಮ್,ಮೈಸೂರು ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ,ಕಲಬುರ್ಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಷಿ, ಶಿವಮೊಗ್ಗ ರಂಗಾಯಣ ನಿರ್ದೇಶಕರಾದ ಸಂದೇಶ ಜವಳಿ ಮತ್ತಿತರ ರಂಗಕರ್ಮಿಗಳು ಉಪಸ್ಥಿತರಿದ್ದರು.. ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರದಲ್ಲಿ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವದೆಂದು ಭರವಸೆ ನೀಡಿದರು.